Interval (Title Track) by Vijay Prakash song Lyrics and video

Artist:Vijay Prakash
Album: Single
Music:Vikas Vasishta
Lyricist:Pramod Maravante
Label:Anand Audio
Genre:Love
Release:2025-04-19

Lyrics (English)

ದೂರದ ಊರು ನಮಗೆ
ದೂರದಿಂದಾನೆ ಚಂದ
ನಮ್ಮೂರೆ ನಮಗೆ ಚಂದ
ಕನಸನ್ನು ಹೊತ್ತು ಹೋಗಿ
ಬರಿಗೈಲೆ ಬಂದೆವು
ಮಗುವಂತೆ ಇದ್ದೋರ್ ನಾವು
ಮರುಳಾಗಿ ಹೋದೆವು
ನಮ್ಮನ್ನೆ ನೋಡಿ ನಮಗೆ
ನಗು ಬಂದ ಹಾಗೆ
ಹೆತ್ತೋರ ಮುಂದೆ ಹೋಗಿ
ನಿಲ್ಲೋದು ನಾನು ಹೇಗೆ
ಭಗವಂತ ಕೊಡುತಾನೆ
ಲೈಫಿನಲ್ಲು
ಸರಿಯಾದ ಟೈಮಲ್ಲೆ
ಇಂಟರ್ವಲ್ಲು
ಕೈ ಬೀಸಿ ತನ್ನ ಕಡೆಗೆ ಕರೆದ ಊರು
ಕೈ ಹಿಡಿಯೊ ಮೊದಲೆ ಬಾಳು ಬೀದಿ ಪಾಲು
ನಾಳೆಯ ಹುಡುಕಿ ಹೋದ ಬಾಳ ದೋಣಿ
ಕಣ್ಣೀರ ನದಿಯ ಸೇರಿ ನೀರುಪಾಲು
ಕಾಸೆಂಬ ಕುಲುಮೆಯೊಳಗೆ
ಕೈಕಾಲು ಬೆಂದವು
ಕಣ್ತುಂಬಾ ಹೊಗೆಯೆ ತುಂಬಿ
ಕಂಗಾಲು ಆದೆವು
ಏನೇನೊ ಹುಡುಕಿ ಹೋಗಿ
ಬಾಳೆಂಬ ಕಾಡಲ್ಲಿ
ಕಳಕೊಂಡ್ವಿ ನಮ್ಮ ನಾವೇನೆ
ಹೋದಂತ ದಾರಿ ಮೇಲೆ
ಮರಳಿ ಬಂದು
ಸರಿದಾರಿ ಕಂಡುಕೊಳ್ಳೊ
ಗುರಿಯು ನಮದು
ಸುತ್ತಾನು ಜನರೆ ಇರುವ
ಸಂತೆಗಿಂತ
ಹೆತ್ತೋರ ಕೂಡಿ ಬಾಳೊ
ಖುಷಿಯೆ ಸ್ವಂತ
ಸೋತೋರ ನಡುವೆ ಬೆರೆತು
ಗೆಲುವನ್ನೆ ಮರೆತೆವು
ಬೆನ್ನಲ್ಲಿ ಬದುಕು ಇಟ್ಟ
ಭಾರಾನೆ ಉಳಿದವು
atozlyric.com
ಏನೇನೊ ಹುಡುಕಿ ಹೋಗಿ
ಬಾಳೆಂಬ ಕಾಡಲ್ಲಿ
ಕಳಕೊಂಡ್ವಿ ನಮ್ಮ ನಾವೇನೆ
Atozlyric.com is now on Facebook , Pinterest , Twitter and Instagram . Follow us and Stay Updated.

About: Interval (Title Track) lyrics in Kannada by Vijay Prakash, music by Vikas Vasishta. Includes YouTube video and lyrics in multiple languages.